top of page

ಲೊಯೊಲಾ ಸಂಸ್ಥೆಗಳು  

ಜಗತ್ತಿನ ಬೆಳಕಾಗಲು 

    ಲೊಯೊಲಾ ಸಂಸ್ಥೆಯ ಪ್ರತಿಯೊಂದು ವಿದ್ಯಾರ್ಥಿಗಳು   ಜಗತ್ತಿನ ಏಳಿಗೆಗೆ ದುಡಿಯುವ ವ್ಯಕ್ತಿಗಳಾಗಲು ನೀಡುತ್ತದೆ .  ಶಿಕ್ಷಣವು, ವ್ಯಕ್ತಿಯ ಪರಿವರ್ತನೆ ಹಾಗೂ ಸಮಾಜದ ಪರಿವರ್ತನೆ ಮಾಡುತ್ತದೆ  ಎಂದು ನಾವು ನಂಬುತ್ತೇವೆ.      ಲೊಯೊಲಾ ಸಂಸ್ಥೆಯಲ್ಲಿ ಅಧ್ಯಯನ ಮಾಡುವ ಪ್ರತಿಯೊಬ್ಬ ವಿದ್ಯಾರ್ಥಿಯು ಜಗತ್ತಿನ ಏಳಿಗೆಗೆ ದುಡಿಯುವ ಪುರುಷ ಹಾಗೂ ಮಹಿಳೆಯರಾಗಲು ಆಹ್ವಾನಿಸಲಾಗಿದೆ. ಇಂದು ನಮಗೆ ಶಿಕ್ಷಣದ ಅಗತ್ಯವಿದೆ.  ಶಿಕ್ಷಣವು  ನಮ್ಮನ್ನು ಪರಿವರ್ತಿಸುತ್ತದೆ ಮತ್ತು ಪ್ರತಿಯೊಬ್ಬರ ಪ್ರತ್ಯೇಕತೆ ಮತ್ತು ಭಿನ್ನಾಭಿಪ್ರಾಯಗಳನ್ನು ಗೌರವಿಸಿ ಸಾಮರಸ್ಯ ಮತ್ತು ಶಾಂತಿಯಿಂದ ಬದುಕುವುದು ಮತ್ತು ಸಾಮಾನ್ಯ ಒಳಿತನ್ನು ಸಾಧಿಸಲು ಸಹೋದರ ಸಹೋದರಿಯರಂತೆ ಒಟ್ಟಾಗಿ ಕೆಲಸ ಮಾಡುವುದು ಹೇಗೆ ಎಂದು ಕಲಿಸುತ್ತದೆ. 

    ಲೋಯೊಲ ಸಂಸ್ಥೆಯು ವಿದ್ಯಾರ್ಥಿಗಳು ಜಗತ್ತಿಗೆ ಬೆಳಕಾಗುವಂತಹ ಶಿಕ್ಷಣವನ್ನು ನೀಡುತ್ತದೆ.  ಸಂಸ್ಥೆಯಲ್ಲಿ ವಿಧ್ಯಾರ್ಥಿಗಳಿಗೆ ಪೂರಕವಾದ ಕಲಿಕೆಯ  ವಾತಾವರಣವನ್ನು ನೀಡುವುದರ ಜೊತೆಗೆ ಉತ್ತಮವಾದ ಉಪನ್ಯಾಸಕರ ವೃಂದವು ಕೂಡ ಇದೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವೂ ಇದೆ.

     ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವದರ ಮೂಲಕ ವಿದ್ಯುರ್ಥಿಗಳಿಗೆ ದಾರಿದೀಪವಾಗಿದೆ. ಈ ಸಂಸ್ಥೆಯು ಉತ್ತಮ ಮೌಲ್ಯಗಳಾದ ಸ್ನೇಹ,ಪ್ರೀತಿ,ವಿಮೋಚನೆ ಹಾಗೂ ಅರಿವು  ಮೂಡಿಸುವ ಸಂಕಲ್ಪವನ್ನು ಹೊಂದಿದೆ.

WhatsApp Image 2024-01-01 at 9.50.15 AM.jpeg

NEW COLLEGE CAMPUS

ABOUT
Principal

ಪ್ರಾಂಶುಪಾಲರ ಮಾತು 

ಫಾ. ಸಂತೋಷ್ ಫೆರ್ನಾಂಡಿಸ್ ಎಸ್.ಜೆ

    ಡಾ. ಬಿ. ಆರ್. ಅಂಬೇಡ್ಕರ್ ಅವರು ಒಮ್ಮೆ ಹೇಳಿದರು: “ಶಿಕ್ಷಣವು ಒಬ್ಬ ವ್ಯಕ್ತಿಯನ್ನು ನಿರ್ಭೀತರನ್ನಾಗಿ ಮಾಡುತ್ತದೆ, ಅವನಿಗೆ ಏಕತೆಯ ಪಾಠವನ್ನು ಕಲಿಸುತ್ತದೆ, ಅವನ ಹಕ್ಕುಗಳ ಬಗ್ಗೆ ಅರಿವು ಮೂಡಿಸುತ್ತದೆ ಮತ್ತು ಅವನ ಹಕ್ಕುಗಳಿಗಾಗಿ ಹೋರಾಡಲು ಪ್ರೇರೇಪಿಸುತ್ತದೆ.” ಶಿಕ್ಷಣ ಒಂದು ಚಳುವಳಿ ಎಂದು ಅವರು ನಂಬಿದ್ದರು. ಅದು ತನ್ನ ಉದ್ದೇಶಗಳನ್ನು ಪೂರೈಸದಿದ್ದರೆ, ಅದು ನಿಷ್ಪ್ರಯೋಜಕವಾಗಿದೆ.  ಇದು ಶಿಕ್ಷಣದ ಈ ತತ್ವಶಾಸ್ತ್ರವೇ ಇಲ್ಲಿ ನಮ್ಮ ಎಲ್ಲಾ ಪ್ರಯತ್ನಗಳಿಗೆ ಮಾರ್ಗದರ್ಶನ ನೀಡುತ್ತದೆ. ನಮ್ಮ ಸಂಸ್ಥೆಯಲ್ಲಿ ನಾವು ಈ ಅಂಬೇಡ್ಕರ್‌ವಾದಿ ಮೌಲ್ಯಗಳನ್ನು ಅಳವಡಿಸಲು  ಪ್ರಯತ್ನಿಸುತ್ತೇವೆ.

    ಈ ಮೌಲ್ಯಗಳು ವಿದ್ಯಾರ್ಥಿಗಳನ್ನು ವಿಮರ್ಶಾತ್ಮಕವಾಗಿ ಯೋಚಿಸುವಂತೆ ಮಾಡುವುದರ ಜೊತೆಗೆ ಉತ್ತಮ ಮನುಷ್ಯರಾಗುವಂತೆ ಮಾಡುತ್ತವೆ. ಈ ಮಹಾನ್ ಕಲಿಕೆಯ ದೇವಾಲಯಕ್ಕೆ ನಿಮ್ಮೆಲ್ಲರನ್ನು ಸ್ವಾಗತಿಸುವ ಸೌಭಾಗ್ಯ ನನಗಿದೆ. ಜಾತ್ಯತೀತ ಮತ್ತು ಪ್ರಯೋಜನಕಾರಿ ವಾತಾವರಣದಲ್ಲಿ ಯುವ ಮನಸ್ಸುಗಳ ಬೆಳವಣಿಗೆಗೆ ಅನನ್ಯ ಅವಕಾಶಗಳನ್ನು ಒದಗಿಸುವ ವಿಜಯಪುರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಇದೂ ಒಂದಾಗಿದೆ. ನಮ್ಮ ವಿದ್ಯಾರ್ಥಿಗಳನ್ನು "  ಜಗತ್ತಿನ ಏಳಿಗೆಗೆ ಪುರುಷ ಹಾಗೂ ಮಹಿಳೆಯರನ್ನಾಗಿ " ಮಾಡುವುದು ಈ ಸಂಸ್ಥೆಯಲ್ಲಿನ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಇಂದು ಜಗತ್ತು ಸವಾಲುಗಳಿಂದ ತುಂಬಿದೆ. ಬೆಳೆಯುತ್ತಿರುವ ಸ್ಪರ್ಧೆ ಇದೆ.

     ಗುಣಮಟ್ಟ ಮತ್ತು ಶ್ರೇಷ್ಠತೆ ಮಾತ್ರ ಮುಖ್ಯ. ಅತ್ಯುತ್ತಮ ಶಿಕ್ಷಕರು, ಸ್ಮಾರ್ಟ್ ಕ್ಲಾಸ್ ಕೊಠಡಿಗಳು, ಉತ್ತಮ ಮೂಲಸೌಕರ್ಯ, ದೊಡ್ಡ ಆಟದ ಮೈದಾನಗಳು ಹಾಗೂ ಉತ್ತಮ ನೈತಿಕ ಮೌಲ್ಯಗಳನ್ನು ಕಲಿಸುವ ಮೂಲಕ ನಾವು ಈ ಸವಾಲುಗಳನ್ನು ಎದುರಿಸಲು ಪ್ರಯತ್ನಿಸುತ್ತಿದ್ದೇವೆ. ಇದರ ಮೂಲಕ ನಾವು ನಮ್ಮ ವಿದ್ಯಾರ್ಥಿಗಳಿಗೆ ಎರಡು ರೀತಿಯ ಶಿಕ್ಷಣವನ್ನು ನೀಡುತ್ತೇವೆ: ಮನಸ್ಸಿನ ಶಿಕ್ಷಣ ಮತ್ತು ಹೃದಯದ ಶಿಕ್ಷಣ.

ಫೋಟೋ ಗ್ಯಾಲರಿ

2000

610

252

358

ಸ್ಥಾಪನೆಯಾದ ವರ್ಷ

ಪ್ರಾಥಮಿಕ

ವಿದ್ಯಾರ್ಥಿಗಳು 

ಪ್ರೌಢಶಾಲೆ

ವಿದ್ಯಾರ್ಥಿಗಳು 

ಪಿಯುಸಿ

ವಿದ್ಯಾರ್ಥಿಗಳು

Events

ಸಂಸ್ಥೆಯ ನೋಟ 

CONTACT

ಸಂಪರ್ಕ

ವಿಳಾಸ

ಲೊಯೊಲಾ ಸಂಸ್ಥೆಗಳು

RPJG+X2X, ಸ್ಟೇಷನ್ ಬ್ಯಾಕ್ ರಸ್ತೆ,

ಜಾದರ್ ಗಲ್ಲಿ, ವಿಜಯಪುರ, ಕರ್ನಾಟಕ, 586101.

ಪ್ರವೇಶ

ಲೊಯೊಲಾ ಪ್ರಾಥಮಿಕ, ಪ್ರೌಢಶಾಲೆ ಅಥವಾ PUCಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು, 

ಮೊಬೈಲ್ ಸಂಖ್ಯೆ 8951930565

bottom of page